: ಭಾರತೀಯ ಷೇರು ಮಾರುಕಟ್ಟೆ ಶುಕ್ರವಾರ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿದೆ. ಗುರುವಾರದಂದು ಮಧ್ಯಾಹ್ನದ ನಂತರ ಚೇತರಿಕೆ ಕಂಡಿದ್ದ ಷೇುಪೇಟೆ, ಇಂದು ಶುಕ್ರವಾರದಂದು ದಿನಪೂರ್ತಿ ಕುಸಿತದಲ್ಲೇ ವಹಿವಾಟು ಮುಗಿಸಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯುವ ನಿರೀಕ್ಷೆ ಇದೆ ಎನ್ನುತ್ತಾರೆ ಮಾರುಕ್ಟೆ ತಜ್ಞರು. ಹಾಗಿದ್ದರೆ ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾಣಗಳೇನು ಎಂಬ ಮಾಹಿತಿ ಇಲ್ಲಿದೆ ಡೊನಾಲ್ಡ್ ಟ್ರಂಪ್ ಸುಂಕ ಬೆದರಿಕೆ ಪರಿಣಾಮ ಜಾಗತಿಕ ಮಾರುಕಟ್ಟೆ ಸೇರಿದಂತೆ ದೇಶೀಯ ಮಾರುಕಟ್ಟೆಗಳು ಏಕಕಾಲದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ನಿನ್ನೆ ಗುರುವಾರದಂದು ಚೇತರಿಸಿಕೊಂಡಿದ್ದ […]
Author: Irshad
ಓಲಾ, ಊಬರ್ ಮಾದರಿಯಲ್ಲೇ Ambulance ಬುಕಿಂಗ್ ವ್ಯವಸ್ಥೆ – ಸರ್ಕಾರದಿಂದ ಮಹತ್ವದ ನಿರ್ಧಾರ
ಹೆಚ್ಚಿನ ಹಣ ಪೀಕುತ್ತಿದ್ದ ಆ್ಯಂಬುಲೆನ್ಸ್ ಸಂಸ್ಥೆಗಳಿಗೆ ಸರ್ಕಾರ ಮೂಗುದಾರ ಹಾಕಲು ಮುಂದಾಗಿದೆ. ಕೆಪಿಎಂಇ ಕಾಯ್ದೆ ಅಡಿಯಲ್ಲಿ ಆ್ಯಂಬುಲೆನ್ಸ್ ಸಂಸ್ಥೆಗಳನ್ನು ತರಲು ಕರ್ನಾಟಕ ಸರ್ಕಾರ ಮುಂದಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಆ್ಯಂಬುಲೆನ್ಸ್ ಹೆಚ್ಚಿನ ದರ ವಿಧಿಸುತ್ತಿವೆ ಎಂಬ ದೂರು ಇದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಚಿವರು.. ಕೆಪಿಎಂಇ (Karnataka Private Medical Establishment Act) ಅಡಿಯಲ್ಲಿ ಆ್ಯಂಬುಲೆನ್ಸ್ಗಳನ್ನು ಸರ್ಕಾರದಡಿಯಲ್ಲಿ ತರುತ್ತಿದ್ದೇವೆ ಬರುವ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಲಿದೆ. ಆ್ಯಂಬುಲೆನ್ಸ್ ಹೇಗಿರಬೇಕು, ಮಾನದಂಡ […]
ನಾಳೆ ಬೆಂಗಳೂರಲ್ಲಿ ಪ್ರಧಾನಿ ಮೋದಿ.. ಮೆಟ್ರೋ, 3 ವಂದೇ ಭಾರತ್ ರೈಲು ಸೇರಿ ಏನೆಲ್ಲ ಉದ್ಘಾಟಿಸ್ತಾರೆ..?
ಹಲವು ವರ್ಷಗಳ ಬಳಿಕ ನನಸಾಗಿರೋ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ನಾಳೆ ಹಳದಿ ಮಾರ್ಗಕ್ಕೆ ದೇಶದ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ. ಹಲವು ವರ್ಷಗಳ ಬಳಿಕ ನನಸಾಗಿರೋ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ನಾಳೆ ಹಳದಿ ಮಾರ್ಗಕ್ಕೆ ದೇಶದ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ. ಮೋದಿಯಿಂದ ಉದ್ಘಾಟನೆ.. ರಾಜ್ಯರಾಜಧಾನಿಯಲ್ಲಿ ಸಂಚಾರಕ್ಕೆ ಸಿದ್ದಗೊಂಡಿರೋ ಹಳದಿ ಲೈನ್ ಮೆಟ್ರೋಗೆ ಹಸಿರು ನಿಶಾನೆ ತೋರಲು ಪ್ರಧಾನಿ ಮೋದಿ […]
ಭಾವೈಕ್ಯತೆಗೆ ಸಾಕ್ಷಿಯಾದ ಕೊಪ್ಪಳ: ಮುಸ್ಲಿಂ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ
ಕೊಪ್ಪಳ: ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ನಜೀರುದ್ದೀನ್ ಮನೆಯಲ್ಲಿ ವರಮಾಹಾಲಕ್ಷ್ಮೀ ಹಬ್ಬ ಆಚರಿಸಲಾಗಿದೆ. ನಜೀರುದ್ದೀನ್ ಮನೆಗೆ ತರಳು ತೋರಣ ಕಟ್ಟಿ ವಿಜೃಂಭಣೆಯಿಂದ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಗಿದೆ. ನಜೀರುದ್ದೀನ್ ಬಿಸರಳ್ಳಿ 5-6 ವರ್ಷದ ಹಿಂದ ವರಮಾಹಾಲಕ್ಷ್ಮೀ ಹಬ್ಬದ ದಿನ ಮನೆ ಗೃಹಪ್ರವೇಶ ಮಾಡಿದ್ದರು. ನಜೀರುದ್ದೀನ್ ಬಿಸರಳ್ಳಿ ಕುಟುಂಬ ಅಂದಿನಿಂದ ಪ್ರತಿ ವರ್ಷ ವರಮಾಹಾಲಕ್ಷ್ಮೀ ಹಬ್ಬ ಅಚರಣೆ ಮಾಡುತ್ತಿದ್ದಾರೆ.
ಕರ್ನಾಟಕದ ಐವರು ಮಹಿಳೆಯರಿಗೆ ಇಂಗ್ಲೆಂಡ್ನಲ್ಲಿ ಓದಲು 40 ಲಕ್ಷ ರೂ. ವಿದ್ಯಾರ್ಥಿವೇತನ
ಕರ್ನಾಟಕದ ಐವರು ವಿದ್ಯಾರ್ಥಿನಿಯರು ಚೆವನಿಂಗ್-ಕರ್ನಾಟಕ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಸರ್ಕಾರದಿಂದ ಮಹಿಳೆಯರನ್ನು ಈ ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡಲಾಗಿದೆ. ಸರ್ಕಾರಿ ಕಾಲೇಜುಗಳಿಂದ ಮಹಿಳಾ ಪದವೀಧರರನ್ನು ಪರಿಗಣಿಸುವ ಈ ವಿದ್ಯಾರ್ಥಿವೇತನವು ಮುಂದಿನ ಮೂರು ವರ್ಷಗಳವರೆಗೆ ಪ್ರತಿ ವರ್ಷ ಮುಂದುವರಿಯಲಿದ್ದು, ಒಟ್ಟು 15 ಮಹಿಳಾ ಪದವೀಧರರಿಗೆ ಪ್ರಯೋಜನವಾಗಲಿದೆ. ಬೆಂಗಳೂರು, ಆಗಸ್ಟ್ 8: ಕರ್ನಾಟಕದ ಐವರು ಮಹಿಳೆಯರು ಚೆವೆನಿಂಗ್ ವಿದ್ಯಾರ್ಥಿವೇತನದ (Chevening-Karnataka scholarships) ಅಡಿಯಲ್ಲಿ ಇಂಗ್ಲೆಂಡ್ಗೆ (UK) ಪ್ರಯಾಣಿಸಲಿದ್ದಾರೆ. ಚೆವೆನಿಂಗ್-ಕರ್ನಾಟಕ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ 5 ಮಹಿಳಾ ವಿದ್ಯಾರ್ಥಿನಿಯರ ಮೊದಲ ಬ್ಯಾಚ್ ಸೆಪ್ಟೆಂಬರ್‌ನಲ್ಲಿ […]
ಕುವೈತ್: ಬೇಸಿಗೆಯ ತಾಪ ಅಂತಿಮ ಹಂತಕ್ಕೆ- ಆಗಸ್ಟ್ 11 ರಿಂದ ಹೊಸ ಋತು ಆರಂಭ
ಕುವೈತ್ ಸಿಟಿ: ಕುವೈತ್‌ನಲ್ಲಿ ಬೇಸಿಗೆಯ ಕೊನೆಯ ಹಂತವಾದ ಕೆರಿಬಿಯನ್ ಋತುವು ಪ್ರಾರಂಭವಾಗಿದೆ ಎಂದು ಅಲ್-ಉಜೈರಿ ವೈಜ್ಞಾನಿಕ ಕೇಂದ್ರವು ಘೋಷಿಸಿದೆ. ಈ ಅವಧಿಯು ಆಗಸ್ಟ್ 11 ರಂದು ಪ್ರಾರಂಭವಾಗಲಿದೆ. ಈ ಋತುವು ತೀವ್ರ ಶಾಖದಿಂದ ತಾಪಮಾನವು ಕಡಿಮೆಯಾಗಲು ಪ್ರಾರಂಭಿಸುತ್ತಿದೆ ಎಂಬುದರ ಸಂಕೇತವಾಗಿದೆ. ಕೆರಿಬಿಯನ್ ಋತುವು 13 ದಿನಗಳವರೆಗೆ ಇರಲಿದೆ. ಈ ಅವಧಿಯ ನಂತರ, ಸುಹೈಲ್ ನಕ್ಷತ್ರದ ಗೋಚರಿಸುವಿಕೆಯೊಂದಿಗೆ ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಕಠಿಣ ಬೇಸಿಗೆಯು ಅಧಿಕೃತವಾಗಿ ಕೊನೆಗೊಳ್ಳುತ್ತದೆ. ಕುವೈತ್‌ನಲ್ಲಿ ಮುಂದಿನ ದಿನಗಳಲ್ಲಿ ಬಿಸಿ ಮತ್ತು ತೇವಾಂಶವುಳ್ಳ ವಾತಾವರಣವಿರಲಿದೆ ಎಂದು […]
ಮತ್ತೆ ಶುರು IPT 12.. ಆಗಸ್ಟ್ 9-15ರವರೆಗೆ ನಡೆಯಲಿದೆ ಸೀಸನ್-2 ಕ್ರಿಕೆಟ್ ಟೂರ್ನಮೆಂಟ್
ಸುನಿಲ್ ಕುಮಾರ್ ಬಿ. ಆರ್ ನೇತೃತ್ವದ ಎನ್ 1 ಕ್ರಿಕೆಟ್ ಅಕಾಡೆಮಿ ಕ್ರಿಕೆಟ್ ಪ್ರೇಮಿಗಳಿಗಾಗಿ ಹಲವಾರು ಟೂರ್ನಮೆಂಟ್ ಆಯೋಜಿಸಿ ಯಶಸ್ವಿ ಕಂಡಿದೆ. ಇದೀಗ ಮತ್ತೊಮ್ಮೆ IPT12 ಏರ್ಪಡಿಸಿದೆ. ಕಳೆದ ವರ್ಷ IPT12 ಯಶಸ್ವಿಯಾಗಿ ಜರುಗಿದ್ದು, ಇದೀಗ IPT12 ಸೀಸನ್ 2 ಚಾಲನೆ ದೊರೆತಿದೆ. ಡಾಕ್ಟರ್ಸ್, ಲಾಯರ್ಸ್, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು, ಸಿವಿಲ್ ಕಾಂಟ್ರಾಕ್ಟರ್ಸ್,ಎಕ್ಸ್ಜಿ ಡಿಪಾರ್ಟ್ಮೆನ್ ಕರ್ನಾಟಕ ಪೊಲೀಸ್,ಪ್ರೈವೇಟ್ ಲಿಮಿಟೆಡ್ ಕಂಪನಿ ವಿನ್ ಟೈಮ್ ಹೀಗೆ ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್ IPT12 […]
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ಗೆ ಜೊತೆಯಾದ ರುಕ್ಮಿಣಿ ವಸಂತ್; ಕನಕವತಿ ಪೋಸ್ಟರ್ ರಿಲೀಸ್
ಸದ್ಯ ನಾಡಿನಾದ್ಯಂತ ಹಬ್ಬದ ಕಲರವ ಇದ್ದರೇ ಇತ್ತ ಕಾಂತಾರ ಸಿನಿಮಾ ತಂಡದವರು ಚಾಪ್ಟರ್- 1 ರಲ್ಲಿ ಹೀರೋಯಿನ್ ಅವರ ಪಾತ್ರ ಪರಿಚಯ ಮಾಡಿದ್ದಾರೆ. ಈ ಬಗ್ಗೆ ಮೊದಲು ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ. ‘ಕಾಂತಾರ’ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ ಆಗಿದ್ದರು. ಈ ಚಿತ್ರದ ಮೂಲಕ ಅವರಿಗೆ ಬೇಡಿಕೆ ಹೆಚ್ಚಿತು. ಈ ಚಿತ್ರದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾಗೆ ನಾಯಕಿ ಯಾರು ಎಂಬ ವಿಚಾರ ಈವರೆಗೆ ರಿವೀಲ್ ಆಗಿರಲಿಲ್ಲ. ಈಗ ಈ ವಿಷಯದ […]
ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಬಿಎನ್ಎಸ್ ಕಾಯ್ದೆಯಡಿ ಸೆಕ್ಷನ್ 108, 352, 351 ಹಾಗೂ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ. […]
ಮತದಾರರ ಪಟ್ಟಿ ಹಗರಣ: ಅಗತ್ಯವಿದ್ದರೆ ವರುಣಾ, ಚಾಮರಾಜಪೇಟೆಯಲ್ಲೂ ತನಿಖೆಯಾಗಲಿ! ಡಿ.ಕೆ. ಶಿವಕುಮಾರ್
ರಾಜ್ಯದ ಮತದಾರರ ಪಟ್ಟಿ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರಿಯಲಿದೆ. ಚುನಾವಣಾ ಆಯೋಗವು ಅಗತ್ಯವಿದ್ದರೆ ವರುಣಾ ಮತ್ತು ಚಾಮರಾಜಪೇಟೆ ಕ್ಷೇತ್ರಗಳಲ್ಲಿಯೂ ತನಿಖೆ ನಡೆಸಲಿ ಎಂದು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ. ಚಿಲುಮೆ ಸಂಸ್ಥೆಯ ಮೂಲಕ ಬಿಜೆಪಿ ಅಕ್ರಮ ಎಸಗಿದೆ ಎಂದು ಆರೋಪಿಸಿದ್ದಾರೆ. ಬೆಂಗಳೂರು (ಆ.08): ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಪಕ್ಷದ ಹೋರಾಟ ಮುಂದುವರಿಯಲಿದೆ. ಯಾವುದೇ ಕ್ಷೇತ್ರದಲ್ಲಿ ಡಬಲ್ ಎಂಟ್ರಿ ಆಗಿದ್ದರೂ ಅದು ತಪ್ಪು. ವರುಣಾ, ಚಾಮರಾಜಪೇಟೆ ಸೇರಿದಂತೆ ಯಾವುದೇ ಕ್ಷೇತ್ರದ ಬಗ್ಗೆ ತನಿಖೆಯಾಗಲಿ, ಅದನ್ನು […]

