ದೇವಭೂಮಿ ಉತ್ತರಾಖಂಡ್ನಲ್ಲಿ ಭಾರಿ ಮಳೆ. ದಿಢೀರ್ ಪ್ರವಾಹ, ಮೇಘಸ್ಫೋಟದಿಂದ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.. ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮ ಕೆಸರಿನಡಿ ಸಮಾಧಿಯಾಗಿದೆ. ನೋಡ ನೋಡುತ್ತಲೇ ಮನೆಗಳು, ಕಟ್ಟಡಗಳು ಕುಸಿದಿದ್ದು ದುರಂತದಲ್ಲಿ ಐವರು ದುರ್ಮರಣಕ್ಕೀಡಾಗಿದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ.

ಬೆಟ್ಟದ ಮೇಲಿಂದ ಬಿರುಗಾಳಿಯಂತೆ ನುಗ್ಗಿದ ಕೆಸರು ಮಿಶ್ರಿತ ನೀರು ಪ್ರಳಯ ಸೃಷ್ಟಿಸಿದ್ದು ಒಂದೊಂದು ದೃಶ್ಯಗಳೂ ಬೆಚ್ಚಿ ಬೀಳಿಸುವಂತಿದೆ. ದಿಢೀರ್ ಮೇಘಸ್ಫೋಟಕ್ಕೆ ಹೆದರಿದ ಧರಾಲಿ ಗ್ರಾಮದ ಜನ ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿದ್ದಾರೆ.
ನೀರಿನ ರಭಸಕ್ಕೆ ಬಹುಮಹಡಿ ಕಟ್ಟಡಗಳು ಆಟಿಕೆಗಳಂತೆ ಕೊಚ್ಚಿ ಹೋಗಿವೆ. ಗ್ರಾಮದಲ್ಲಿದ್ದ 25ಕ್ಕೂ ಹೆಚ್ಚು ಹೋಟೆಲ್ ಹಾಗೂ ಮನೆಗಳು ಧ್ವಂಸಗೊಂಡಿವೆ. ಇಡೀ ಪ್ರದೇಶ ಕೆಸರುಮಯವಾಗಿದೆ. ಕೆಸರಿನಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರು ಹೊರಗೆ ಎದ್ದು ಬರಲು ಹರಸಾಹಸ ಪಟ್ಟು ಪಾರಾಗಿದ್ದಾರೆ.
ಎಸ್ಡಿಆರ್ಎಫ್, ಎನ್ಡಿಆರ್ಎಫ್, ಐಟಿಬಿಪಿ, ಸೇನೆ ಮತ್ತು ಎರಡು ಎಂಐಜಿ ಹಾಗೂ ಎರಡು ಚಿನೂಕ್ ಹೆಲಿಕಾಪ್ಟರ್ಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ಮಾಡ್ತಿದೆ. ಆಧುನಿಕ ಡ್ರೋನ್ಗಳನ್ನು ಬಳಸಿ ನಾಪತ್ತೆಯಾದವರ ಹುಡುಕಾಟ ನಡೆಸಲಾಗ್ತಿದೆ. ಧರಾಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಡಿತಗೊಂಡಿರೋದ್ರಿಂದ, ಬುಲ್ಡೋಸರ್ಗಳು ಮತ್ತು ಇತರ ಯಂತ್ರಗಳು ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ