ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್​ ದಾಖಲಾಗಿದೆ

ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್​ ದಾಖಲಾಗಿದೆ.   

ಬಿಎನ್ಎಸ್ ಕಾಯ್ದೆಯಡಿ ಸೆಕ್ಷನ್ 108, 352, 351 ಹಾಗೂ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಕೇಸ್​ ದಾಖಲಾಗಿದೆ. ಸುಧಾಕರ್ ಮಾತ್ರವಲ್ಲ, ಮೃತ ಬಾಬು ಡೆ*ತ್​ನೋಟ್​​ನಲ್ಲಿ ಉಲ್ಲೇಖಿಸಿರುವ ನಾಗೇಶ್ ಮತ್ತು ಮಂಜುನಾಥ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಬಿಜೆಪಿ ಸಂಸದ ಸುಧಾಕರ್​ ಎ1 ಆಗಿದ್ದಾರೆ. 
ಏನಿದು ಪ್ರಕರಣ..? 

ಚಿಕ್ಕಬಳ್ಳಾಪುರ ನಗರದ ಭಾಪೂಜಿನಗರ ನಿವಾಸಿಯಾಗಿರೋ ಈ ಬಾಬು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗೆ ಚಾಲಕನಾಗಿದ್ದ. ದುರಾದೃಷ್ಟ ಅಂದ್ರೆ ತಾನು ಕೆಲಸ ಮಾಡ್ತಿದ್ದ ಜಿಲ್ಲಾಡಳಿತ ಭವನದ ಆವರಣದಲ್ಲೇ ಮರಕ್ಕೆ ನೇ*ಣು ಬಿಗಿದುಕೊಂಡು ಈ ಬಾಬು ಆತ್ಮ*ಹತ್ಯೆಗೆ ಶರಣಾಗಿದ್ದಾನೆ. 

ಗುತ್ತಿಗೆ ಆಧಾರದಲ್ಲಿ ಚಾಲಕನಾಗಿದ್ದ ಈ ಬಾಬುಗೆ ಸರ್ಕಾರಿ ಕೆಲಸ ಕೊಡಿಸ್ತೀವಿ ಅಂತ ಮೂವರು ವಂಚಿಸಿದ್ದಾರಂತೆ. ಹಾಗಂತ ಈ ಬಾಬುನೇ ಬರೆದಿಟ್ಟಿದ್ದಾನೆ.. ನನ್ನ ಸಾ*ವಿಗೆ ಸಂಸದ ಡಾ.ಕೆ.ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್, NNR ಟ್ರಾವೆಲ್ಸ್​ ನಾಗೇಶ್​ ಈ ಮೂವರೇ ಕಾರಣ ಅಂತ ಬರೆದಿದ್ದಾನೆ.
ಮೃತ ಬಾಬು ಪತ್ನಿ ಶಿಲ್ಪ ನೀಡಿದ ದೂರಿನ ಮೇರೆಗೆ ಸುಧಾಕರ್ ವಿರುದ್ಧ ಕೇಸ್ ದಾಖಲಾಗಿದೆ. ಹಣ ವಂಚನೆ, ಬೆದರಿಕೆ, ಮಾನಸಿಕ‌ ಹಿಂಸೆ, ನಿಂದನೆ, ಆತ್ಮಹತ್ಯೆಗೆ ಪ್ರೇರಣೆ, ದಲಿತ ವ್ಯಕ್ತಿ ಮೇಲೆ ದೌರ್ಜನ್ಯ ಪ್ರಕರಣ ದಡಿ‌ ಪ್ರಕರಣ ದಾಖಲಾಗಿದೆ. ಬಿಎನ್​ಎಸ್ 108  ಆತ್ಮ*ಹ*ತ್ಯೆಗೆ ಪ್ರಚೋದನೆ (ನಾನ್ ಬೇಲಬಲ್ ಸೆಕ್ಷನ್ಸ್), 351 – ಅಪರಾಧಿಕ ಭಯೋತ್ಪಾದನೆ, 352 – ಉದ್ದೇಶಪೂರ್ವಕ ಅವಮಾನ ಹಾಗೂ 3(5)-ಏಕ ಇಚ್ಛೆ ಅಡಿಯಲ್ಲಿ ಕೇಸ್ ದಾಖಲಾಗಿದೆ. ಪ್ರಕರಣದಲ್ಲಿ ಎ2 ನಾಗೇಶ್, ಎ3 ಮಂಜುನಾಥ್ ಆಗಿದ್ದಾರೆ.

Leave a Reply

Your email address will not be published. Required fields are marked *