ಡಯಾಬಿಟಿಸ್ ಇದ್ದರೂ ಅನ್ನ ಊಟ ಮಾಡಬಹುದು ಶುಗರ್ ಜಾಸ್ತಿ ಆಗೋದಿಲ್ಲ…!

ಹೀಗೆ ರಕ್ತಕ್ಕೆ ಸೇರ್ಪಡೆಯಾದ ಸಕ್ಕರೆಯಂಶವು ಇನ್ಸುಲಿನ್‌ನ ಕೊರತೆಯಿಂದಾಗಿ ದೇಹದ ಉಪಯೋಗಕ್ಕೆ ವಿನಿಯೋಗವಾಗದೆ, ರಕ್ತದಲ್ಲಿಯೇ ಉಳಿದುಕೊಳ್ಳುವುದೇ ಮಧುಮೇಹ ಅಥವಾ ಡಯಾಬಿಟೀಸ್‌. ಇನ್ಸುಲಿನ್‌ನ ಕೊರತೆಯು ಇನ್ಸುಲಿನ್‌ಗೆ ಪ್ರತಿರೋಧ (ಟೈಪ್‌ 2 ಮಧುಮೇಹದಲ್ಲಿ ಆಗುವಂತೆ) ಅಥವಾ ದೇಹದಲ್ಲಿ ಇನ್ಸುಲಿನ್‌ ಇಲ್ಲದೇ ಇರುವುದರಿಂದ (ಟೈಪ್‌ 1 ಮಧುಮೇಹದಲ್ಲಿ ಆಗುವಂತೆ) ಆಗಿರಬಹುದು. ರಕ್ತದಲ್ಲಿ ಮಧುಮೇಹಕ್ಕೆ ಸಕ್ಕರೆಯೊಂದೇ ಕಾರಣವೇ? ಸಕ್ಕರೆಯಂಶ ಹೆಚ್ಚುವುದರಿಂದ ಅನೇಕ ತೊಂದರೆಗಳು ಉಂಟಾಗಲಾರಂಭವಾಗುತ್ತವೆ, ಹೀಗಾಗಿ ಇನ್ಸುಲಿನ್‌ ಅಥವಾ ಮಾತ್ರೆಗಳ ಅನ್ವೇಷಣೆಗೆ ಮುನ್ನ ಉಪವಾಸವು ಮಧುಮೇಹಕ್ಕೆ ಅತ್ಯಂತ ಸಾಮಾನ್ಯವಾದ ಚಿಕಿತ್ಸೆಯಾಗಿತ್ತು. ಆದರೆ ಇನ್ಸುಲಿನ್‌ ಅಭಿವೃದ್ಧಿಯು ಸಾಧ್ಯವಾದ ಬಳಿಕ ಮಧುಮೇಹ ಚಿಕಿತ್ಸೆಯ ಶೈಲಿ ಸಂಪೂರ್ಣವಾಗಿ ಬದಲಾಯಿತು, ಇದರಿಂದಾಗಿ ಪ್ರಸ್ತುತ ಮಧುಮೇಹ ರೋಗಿಗಳು ಕೂಡ ಎಲ್ಲರಂತೆ ಜೀವನ ನಡೆಸುವುದು ಸಾಧ್ಯವಾಗುತ್ತಿದೆ.

Social Share

Leave a Reply

Your email address will not be published. Required fields are marked *