: ಭಾರತೀಯ ಷೇರು ಮಾರುಕಟ್ಟೆ ಶುಕ್ರವಾರ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿದೆ. ಗುರುವಾರದಂದು ಮಧ್ಯಾಹ್ನದ ನಂತರ ಚೇತರಿಕೆ ಕಂಡಿದ್ದ ಷೇುಪೇಟೆ, ಇಂದು ಶುಕ್ರವಾರದಂದು ದಿನಪೂರ್ತಿ ಕುಸಿತದಲ್ಲೇ ವಹಿವಾಟು ಮುಗಿಸಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯುವ ನಿರೀಕ್ಷೆ ಇದೆ ಎನ್ನುತ್ತಾರೆ ಮಾರುಕ್ಟೆ ತಜ್ಞರು. ಹಾಗಿದ್ದರೆ ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾಣಗಳೇನು ಎಂಬ ಮಾಹಿತಿ ಇಲ್ಲಿದೆ

ಡೊನಾಲ್ಡ್ ಟ್ರಂಪ್ ಸುಂಕ ಬೆದರಿಕೆ ಪರಿಣಾಮ ಜಾಗತಿಕ ಮಾರುಕಟ್ಟೆ ಸೇರಿದಂತೆ ದೇಶೀಯ ಮಾರುಕಟ್ಟೆಗಳು ಏಕಕಾಲದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ನಿನ್ನೆ ಗುರುವಾರದಂದು ಚೇತರಿಸಿಕೊಂಡಿದ್ದ ಭಾರತೀಯ ಷೇರು ಮಾರುಕಟ್ಟೆ ಶುಕ್ರವಾರದಂದು ಮತ್ತೆ ಮುಗ್ಗರಿಸಿದೆ. ಬಿಎಸ್‌ಇ ಸೆನ್ಸೆಕ್ಸ್ 765 ಪಾಯಿಂಟ್ಸ್ ಕುಸಿತದೊಂದಿಗೆ 79,858ರ ಮಟ್ಟದಲ್ಲಿ ವಹಿವಾಟು ಮುಗಿಸಿದೆ. ನಿಫ್ಟಿ ಕೂಡ 233 ಪಾಯಿಂಟ್ಸ್ ಇಳಿಕೆಯೊಂದಿಗೆ 24,363ರ ಮಟ್ಟದಲ್ಲಿ ಮುಕ್ತಾಯವಾಯಿತು. ಶುಕ್ರವಾರದ ಷೇರುಪೇಟೆ ಕುಸಿತಕ್ಕೆ ಐದು ಪ್ರಮುಖ ಕಾರಣಗಳು ಇಲ್ಲಿವೆ
ಟ್ರಂಪ್ ಸುಂಕಗಳ ಹೊಡೆತ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ರಫ್ತುಗಳ ಮೇಲಿನ ಸುಂಕವನ್ನು ಶೇ.50ಕ್ಕೆ ಹೆಚ್ಚಿಸಿದ ನಂತರ, ಈ ಸುಂಕಗಳು ಅನ್ವಯವಾಗುವ ವಲಯಗಳ ಮೇಲೆ ಮಾರಾಟದ ಒತ್ತಡ ಹೆಚ್ಚಿದೆ. ಭಾರತದ ಮೇಲೆ ಅಮೆರಿಕ ವಿಧಿಸಿದ 50% ಸುಂಕವು ಯಾವುದೇ ಅಮೆರಿಕನ್ ವ್ಯಾಪಾರ ಪಾಲುದಾರ ರಾಷ್ಟ್ರದ ಮೇಲೆ ವಿಧಿಸಿದ ಅತಿದೊಡ್ಡ ಸುಂಕ ಹೆಚ್ಚಳಗಳಲ್ಲಿ ಒಂದಾಗಿದೆ. ಇದು ದೇಶೀಯ ಮಾರುಕಟ್ಟೆ ಮೇಲೂ ಪ್ರಭಾವ ಬೀರಿದೆ. ಹೆಚ್ಚಿದ ಸುಂಕಗಳ ಕಾರಣದಿಂದಾಗಿ ಕಂಪನಿಗಳ ಲಾಭದಾಯಕತೆ ಕಡಿಮೆಯಾಗಬಹುದು ಮತ್ತು ಭಾರತದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಬೆಲೆಗಳು ಏರಬಹುದು ಎಂಬ ಆತಂಕದಲ್ಲಿ ಮಾರುಕಟ್ಟೆ ಕುಸಿತಕ್ಕೆ ಒಳಗಾಗಿದೆ.
ಎಫ್‌ಐಐಗಳ ನಿರಂತರ ಮಾರಾಟ
ಭಾರತೀಯ ಮಾರುಕಟ್ಟೆಗಳಲ್ಲಿ ವಿದೇಶಿ ಹೂಡಿಕೆದಾರರು (FIIs) ಈಗಾಗಲೇ ನಿರಂತರವಾಗಿ ಷೇರುಗಳ ಮಾರಾಟ ಮಾಡುತ್ತಿದ್ದು, ತಮ್ಮ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಸುಂಕ ಹೆಚ್ಚಳವು ಎಫ್‌ಐಐಗಳಿಗೆ ತಮ್ಮ ಹೂಡಿಕೆ ಹಿಂಪಡೆಯಲು ಹೊಸ ನೆಪ ಸಿಕ್ಕಂತಾಗಿದೆ. ಎಫ್‌ಐಐಗಳು ಕಳೆದ ಒಂದು ವಾರದಿಂದಲೂ ಭಾರೀ ಮಾರಾಟದಲ್ಲಿ ತೊಡಗಿದ್ದಾರೆ. ಆಗಸ್ಟ್ 7 ರಂದು ಅವರು ಭಾರತೀಯ ಇಕ್ವಿಟಿಗಳಿಂದ ₹4,997.19 ಕೋಟಿ ಹಿಂಪಡೆದರು. ಎಫ್‌ಐಐಗಳ ಈ ಮಾರಾಟದ ಒತ್ತಡವು ಭಾರತೀಯ ಮಾರುಕಟ್ಟೆಗಳಲ್ಲಿನ ನಿರಂತರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಈ ಮಾರಾಟವು ಇನ್ನಷ್ಟು ಮುಂದುವರಿಯುವ ನಿರೀಕ್ಷೆ ಇದೆ.

