ಕೇಂದ್ರ ಸರ್ಕಾರದಿಂದಲೇ ಉದ್ಯೋಗ ಹುಡುಕುವವರಿಗೆ ಜಾಬ್ ಆ್ಯಪ್ ಲಾಂಚ್‌!


ಕೇಂದ್ರ ಸರ್ಕಾರವು ಉದ್ಯೋಗ ಹುಡುಕುವ ನಿರುದ್ಯೋಗಿಗಳಿಗಾಗಿ ಜಾಬ್ ಆ್ಯಪ್ ಒಂದು ಅನ್ನು ಲಾಂಚ್ ಮಾಡಿದೆ. ಸ್ಕಿಲ್ ಇಂಡಿಯಾ ಅಸಿಸ್ಟೆಂಟ್ ಜಾಬ್ ಆ್ಯಪ್ ಅನ್ನು ಕೇಂದ್ರ ಸರ್ಕಾರ ಡೆವಲಪ್ ಮಾಡಿದೆ. ಆ್ಯಪ್ ನಲ್ಲೇ ಎಲ್ಲ ಸರ್ಕಾರಿ ಮತ್ತು ಖಾಸಗಿ ಉದ್ಯೋಗ ನೇಮಕಾತಿಯ ಸಂಪೂರ್ಣ ಮಾಹಿತಿ ಸಿಗಲಿದೆ
ನೀವು ಎಷ್ಟು ಬೇಕಾದ್ರೂ ಓದಬಹುದು. ಆದ್ರೆ ಈಗ ಓದಿಗೆ ತಕ್ಕಂತೆ ಕೆಲಸ ಸಿಗೋದು ಬಹಳ ಕಷ್ಟ. ಹಾಗಂತ ನೀವು ಹೆದರಬೇಕಿಲ್ಲ. ಬದಲಿಗೆ ಈ ಆನ್​​ಲೈನ್​ ದುನಿಯಾದಲ್ಲಿ ಮನೆಯಲ್ಲೇ ಕೂತು ಕೆಲಸ ಹುಡುಕಬಹುದು.
ಇದು ಸ್ಮಾರ್ಟ್​ಫೋನ್​​ ಜಗತ್ತು. ಎಲ್ಲವೂ ಆ್ಯಪ್‌ ಮೂಲಕವೇ ನಡೆಯುತ್ತಿರೋ ಈ ಕಾಲದಲ್ಲೂ ಒಳ್ಳೆಯ ಕೆಲಸಕ್ಕಾಗಿ ಹುಡುಕಾಟ ನಡೆಸಲೇಬೇಕು. ಆನ್‌ಲೈನ್‌ ಮೂಲಕ ಸೂಕ್ತ ಖಾಸಗಿ ನೌಕರಿ ಹುಡುಕಲು ಸಾಕಷ್ಟು ಜಾಬ್​​ ಆ್ಯಪ್ಗಳು ಇವೆ. ಈ ಜಾಬ್​​ ಆ್ಯಪ್ಗಳಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರೊಫೈಲ್ ಕ್ರಿಯೇಟ್​​ ಮಾಡಬೇಕು. ಅಲ್ಲಿ ಕೇಳಲಾದ ಅಗತ್ಯ ಮಾಹಿತಿ ಭರ್ತಿ ಮಾಡಿ ಅಪ್‌ಡೇಟ್‌ ರೆಸ್ಯೂಮ್ ಅಪ್‌ಲೋಡ್‌ ಮಾಡಿದ್ರೆ ಕೆಲಸ ಸಿಗುತ್ತದೆ. ಇಷ್ಟೇ ಅಲ್ಲ ಜಾಬ್​​ ಆಪ್ಸ್‌ಗಳಲ್ಲಿ ಹೊಸ ಕೆಲಸಗಳ ಬಗ್ಗೆ ನೋಟಿಫಿಕೇಶನ್ ಕೂಡ ಬರುತ್ತದೆ.
ಈ ಜಾಬ್​ ಆ್ಯಪ್​​ಗಳಲ್ಲಿ ಕೆಲಸ ಹುಡುಕಿ ಸೆಟಲ್​ ಆಗುತ್ತಿರೋರು ಒಂದು ಕಡೆ ಆದ್ರೆ.. ಮತ್ತೊಂದು ಕಡೆ ಮೋಸ ಹೋಗೋ ಜನ ಕೂಡ ಇದ್ದಾರೆ. ಉದಾಹರಣೆಗೆ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್​​ಗಳಲ್ಲಿ ಟೆಲಿಗ್ರಾಮ್ ಒಂದು. ಲಕ್ಷಾಂತರ ಜನ ಟೆಲಿಗ್ರಾಮ್ ಆ್ಯಪ್​​ ಬಳಸುತ್ತಾರೆ. ಆದರೆ ಇದೇ ಟೆಲಿಗ್ರಾಮ್ ಆ್ಯಪ್​ ಅನ್ನು ಬಂಡವಾಳ ಮಾಡಿಕೊಂಡಿರೋ ಕಿಡಿಗೇಡಿಗಳು ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ಮೋಸ ಮಾಡುತ್ತಿದ್ದಾರೆ. ಹೀಗೆ ಯಾರು ಮೋಸ ಹೋಗಬಾರ್ದು ಅಂತಾ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಉದ್ಯೋಗಾಕಾಂಕ್ಷಿಗಳಿಗೆ ನೌಕರಿ ಬಗ್ಗೆ ಮಾಹಿತಿ ನೀಡಲು ಜಾಬ್​ ಆ್ಯಪ್ ಜಾರಿಗೆ ತಂದಿದ್ದು, ಇದು ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ
ಕೇಂದ್ರ ಸರ್ಕಾರ ಲಾಂಚ್​ ಮಾಡಿರೋ ಆ್ಯಪ್​ ಯಾವುದು?
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಅಂದ್ರೆ MSDE ಅಂತಲೂ ಕರೀತಾರೆ. MSDE ಮೆಟಾ ಮತ್ತು ಸರ್ವಂ ಎಐ ಜೊತೆಗೆ ಸೇರಿ Skill India Assistant ಜಾಬ್​ ಆ್ಯಪ್​​ ಡೆವಲಪ್​ ಮಾಡಿದೆ. ಇದು ಕಂಪ್ಲೀಟ್​​​​ ಎಐ ಆಧಾರಿತ ಜಾಬ್​ ಆ್ಯಪ್​ ಆಗಿದ್ದು, ವಾಟ್ಸಪ್​​ನಲ್ಲೇ ಇದರೊಂದಿಗೆ ಚಾಟ್​ ಮಾಡಬಹುದು.
ಕೆಲಸ ಹುಡುಕೋರಿಗೆ ಇದೊಂದು ಪರಿಣಾಮಕಾರಿ ಆ್ಯಪ್‌. ಸಾವಿರಾರು ಉದ್ಯೋಗವಾಕಾಶಗಳ ವಿವರಗಳನ್ನು ಈ ಆ್ಯಪ್​ನಲ್ಲಿ ಅಪ್ಲೋಡ್​ ಮಾಡಲಾಗಿದೆ. ಅತ್ಯಂತ ಸರಳ ವಿನ್ಯಾಸದ ಈ ಆ್ಯಪ್‌ ಅನ್ನು ಬಳಸುವುದು ತುಂಬಾ ಸುಲಭ. ಯಾವ ರೀತಿಯ ಉದ್ಯೋಗ, ಯಾವ ಸ್ಥಳದಲ್ಲಿ ಆಗಬೇಕು ಎಂಬುದನ್ನು ಬರೆದು ಹುಡುಕಿದರೆ ಆಯಿತು. ಆ ನಿರ್ದಿಷ್ಟ ಸ್ಥಳದಲ್ಲಿ ಇರುವ, ಬಳಕೆದಾರನ ಅವಶ್ಯಕತೆಗೆ ಹೊಂದುವ ಉದ್ಯೋಗಾವಕಾಶಗಳನ್ನು ಇದು ನೀಡುತ್ತದೆ. ಪ್ರತಿ ನೌಕರಿಯ ವಿವರಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇಲ್ಲಿ ಸರ್ಕಾರಿ ಮತ್ತು ಖಾಸಗಿ ಕೆಲಸಗಳ ಬಗ್ಗೆ ಮಾಹಿತಿ ಇರುತ್ತದೆ ಅನ್ನೋದು ವಿಶೇಷ.
ನೀವು 8448684032 ನಂಬರ್​ ಸೇವ್​ ಮಾಡಿಕೊಂಡು ವಾಟ್ಸಪ್​​ನಲ್ಲಿ ಮೆಸೇಜ್​​​ ಹಾಕಿದ್ರೆ ಸಾಕು ಬೇಕಾದ ಜಾಬ್​ ಬಗ್ಗೆ ಅಪ್ಡೇಟ್​ ನೀಡುತ್ತೆ. ಈ ಆ್ಯಪ್​​ ಇಂಗ್ಲೀಷ್​ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಇದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಭಾಷೆಗಳಲ್ಲೂ ಲಾಂಚ್​ ಮಾಡೋ ಪ್ಲಾನ್​ ಇದೆ ಎಂದು ತಿಳಿದು ಬಂದಿದೆ.
ಆ್ಯಪ್‌ ಮೂಲಕವೇ ಹುದ್ದೆಗೆ ಅರ್ಜಿ ಹಾಕಬಹುದು. ಉದ್ಯೋಗ ಆಕಾಂಕ್ಷಿಗಳಿಗೆ ರೆಸ್ಯೂಮ್‌ ಅನ್ನು ಅಪ್‌ಲೋಡ್‌ ಆಪ್ಷನ್​ ಕೂಡ ಇದೆ. ಈ ಆ್ಯಪ್‌ ಅನ್ನು ಆ್ಯಪಲ್‌, ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *