ಅನ್ನದಾತರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಕರ್ನಾಟಕ ಸರ್ಕಾರ..!

ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್​​ನ್ಯೂಸ್ ಸಿಕ್ಕಿದೆ. ವಿಧಾನಸೌಧದಲ್ಲಿ ಮಾಹಿತಿ ನೀಡಿರುವ ಕೃಷಿ ಸಚಿವ ಚಲುವರಾಯಸ್ವಾಮಿ.. 18 ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ (minimum support price) ಕೊಡಲು ತೀರ್ಮಾನ ಮಾಡಿದೆ ಎಂದು ಘೋಷಣೆ ಮಾಡಿದರು.

ಬೆಂಗಳೂರು: ರಾಜ್ಯ ಸರ್ಕಾರದಿಂದ (Karnataka Govt) ರೈತರಿಗೆ ಗುಡ್​​ನ್ಯೂಸ್ ಸಿಕ್ಕಿದೆ. ವಿಧಾನಸೌಧದಲ್ಲಿ ಮಾಹಿತಿ ನೀಡಿರುವ ಕೃಷಿ ಸಚಿವ ಚಲುವರಾಯಸ್ವಾಮಿ.. ಸಚಿವ ಸಂಪುಟದ ಉಪ ಸಮಿತಿಯು ಒಂದು ನಿರ್ಧಾರ ಮಾಡಿದೆ. ಈ ಬಾರಿ ರೈತರಿಗೆ ಸಿಹಿ ಸುದ್ದಿಕೊಡಬೇಕು ಅಂದುಕೊಂಡಿದ್ದೇವೆ. ಹೀಗಾಗಿ 18 ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆ (minimum support price) ಕೊಡಲು ತೀರ್ಮಾನ ಮಾಡಿದೆ ಎಂದು ಘೋಷಣೆ ಮಾಡಿದರು.

ರಾಗಿ, ಭತ್ತ, ಜೋಳ, ತೊಗರಿ, ಶೇಂಗಾ, ಹತ್ತಿ ಸೇರಿದಂತೆ ಹದಿನೆಂಟು ಬೆಳೆಗಳಿಗೆ ಸರ್ಕಾರದ ಬೆಂಬಲ ಬೆಲೆ ನೀಡಲಿದೆ. ಸರ್ಕಾರದಿಂದ 15 ಲಕ್ಷ ಮೆಟ್ರಿಕ್​ ಟನ್ ಉತ್ಪನ್ನಕೊಳ್ಳಲು ತೀರ್ಮಾನ ಮಾಡಲಾಗಿದೆ. ಅದರಲ್ಲಿ 6 ಲಕ್ಷ ಮೆಟ್ರಿಕ್ ಟನ್​ ರಾಗಿ ಖರೀದಿಸಲು ತೀರ್ಮಾನ ಮಾಡಲಾಗಿದೆ. ಎಕರೆಗೆ 10 ಕ್ವಿಂಟಾಲ್ ಗರಿಷ್ಟ 50 ಕ್ವಿಂಟಲ್ ಖರೀದಿ ಮಾಡಲಾಗುವುದು. ಕ್ವಿಂಟಾಲ್​ಗೆ 4886 ರೂಪಾಯಿಗೆ ಖರೀದಿ ಮಾಡಲಾಗುವುದು ಎಂದರು.

ಇನ್ನು ಸೆಪ್ಟೆಂಬರ್​ನಿಂದ ರಿಜಿಸ್ಟ್ರೇಷನ್ ಆರಂಭವಾಗಲಿದೆ. 3 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ನಿರ್ಧಾರ ಮಾಡಲಾಗಿದೆ. ಕ್ವಿಂಟಾಲ್​ಗೆ 2369 ರೂಪಾಯಿಗೆ ಖರೀದಿ ಮಾಡ್ತೀವಿ. ಪ್ರತಿ ರೈತರಿಂದ ಗರಿಷ್ಠ 25 ಕ್ಷಿಂಟಾಲ್ ಖರೀದಿ ಮಾಡಲಾಗುವುದು. ಹಾಗೆಯೇ 3 ಲಕ್ಷ ಮೆಟ್ರಿಕ್ ಟನ್ ಬಿಳಿ ಜೋಳ ಖರೀದಿಗೆ ನಿರ್ಧಾರ ಮಾಡಲಾಗಿದೆ. ಗರಿಷ್ಟ ಒಬ್ಬ ರೈತರಿಂದ 150 ಕ್ವಿಂಟಲ್ ಖರೀದಿ ಮಾಡಲಾಗುವುದು. ಪ್ರತಿ ಕ್ವಿಂಟಲ್​​ಗೆ 3669 ರೂಪಾಯಿಯಂತೆ ಖರೀದಿಸಲಾಗುವುದು.

ಹಾಗೆಯೇ ಸಿರಿಧಾನ್ಯವನ್ನೂ ಸರ್ಕಾರ ಖರೀದಿ ಮಾಡಲಿದೆ. ನವಣೆ, ಸಾಮೆ, ಹಾರಕ ಮುಂದಾದ ಸಿರಧಾನ್ಯ ಖರೀದಿ ಆಗಲಿದೆ. ಕ್ವಿಂಟಾಲ್​ಗೆ 4886 ರೂಪಾಯಿ ಬೆಂಬಲ ಬೆಲೆ ನೀಡಲಾಗುವುದು. ಇದಕ್ಕೆ 114 ರೂಪಾಯಿ ಉತ್ತೇಜನ ಮೊತ್ತ ಸೇರಿಸಿ ಒಟ್ಟು 5 ಸಾವಿರ ಕೊಡಲಾಗುತ್ತದೆ ಎಂದರು.

Social Share

Leave a Reply

Your email address will not be published. Required fields are marked *